Monday, September 1, 2008

To see what I am made of?

Today I decided against writing my blog in my language... Kannada... yes that funny looking fonts on my blogs:) but it has a long history at least as long as 8th century AD, and quite scientific in that... lets just leave it at that for the moment and try to focus on what I am trying to say tonight. Yes this question often comes to me in an abstract way perhaps, because I am always trying to prove the unforeseeable, unconventional in my work and outside my work... working out beyond my abilities taking risks that were absolutely unnecessary in life as well as day to day events almost being reckless or otherwise as one of my new friends described me carefree... what drives me to that?s it the testosterone? or just the curiosity as to how much I can push my body? still searching for an answer while trying to figure out the answers...

Thursday, August 7, 2008

ಜಡ

kala

ಕಾಲ ಎಂಬ ಹಂತಕ
ಒಂದೊಂದು ಚಣದಲ್ಲೇ
ಹತ್ತಿಪ್ಪತ್ತು ಸಾವಿರ
ಅಥವ ಮಿಲಿಯಗಟ್ಟಲೆ
ಜೀವಕೋಶಗಳ ಮರ್ಧಿಸುವಾಗ
ನಾ ಬಹುಶಃ
ಬಿಯರ ಕುಡಿಯುತಲಿದ್ದೆ
ಅಥವಾ ಸಿಗರೇಟ ಹೊಗೆಯ
ಸುರು ಸುರುಳಿಯಾಗಿ ತೇಲಿಸುತಲಿದ್ದೆ
ಕಾಲನೆಂಬ ಕಟುಕ
ಕತ್ತರಿಸುದ್ದಿದ್ದಾಗ...
ಕೊನೆಗೊಂದು ದಿನ
ಸಿದ್ಧಾರ್ಥನಿಗದಂತೆ
ನನಗೂ ಸ್ವಲ್ಪ ಜ್ಞಾನೋದಯವಾಗಿ
ಎಚ್ಚೆತ್ತಾಗ
ಕಾಲ ಮೀರಿ ಹೋಗಿತ್ತು

Monday, August 4, 2008

ಒಬ್ಬ ಏಕಾಂಗಿ

ಇನ್ನೊಬ್ಬ ಏಕಾಂಗಿಯನ್ನ

ಬಹು ದೂರದಿಂದ

ಕಾಣುತ್ತಾನೆ

ಆದರೆ ಏಕಾಂತವೆನ್ನುವುದದೇನು?

ಎಲ್ಲಿದೆ ಅದು

ಈ ಜಗ್ಗತ್ತಿನಲ್ಲಿ

ಸಿಗುವದೇ
ನಮಗೂ ಕೂಡ

ಎನ್ನುವರೆ ಬಹಳ

ನಿಮಗೇನಾದರೂ

ಸಿಕ್ಕರೆ ಏಕಾಂತ

ನನಗೂ ಸ್ವಲ್ಪ ವಿಳಾಸ ಕೊಡಿ

ಹೆಸರು ಸುದರ್ಶನ ಶರ್ಮ

ಉಳಿದ್ದದ್ದೆಲ್ಲ ಗೂಗಲಿಗರಿಗೆ

ಕಷ್ಟವೇನೂ ಇಲ್ಲ

೦೬ ೧೩ ೧೬ ೩೪ ೫೦ ೦೨

೨೪ ಘಂಟೆಗಳು

ನಿನಗೋಸ್ಕರ

ಸುದು

Sunday, August 3, 2008

ಹುಡುಗಾಟ.... ಎಲ್ಲಿಂದಲೋ ಎಲ್ಲಿಗೋ ತಾಳ್ಮೆ ಇದ್ದವರಿಗೆ ಮಾತ್ರ

ಹುಡುಗಾಟ.... ಎಲ್ಲಿಂದಲೋ ಎಲ್ಲಿಗೋ ತಾಳ್ಮೆ ಇದ್ದವರಿಗೆ.... ಅದೇ ಮನೆಯಿಂದ ಕದ್ದು ತಂದ ಉಪ್ಪು ಖಾರಾ ನ ಹೆದ್ದಾರಿ ಪಕ್ಕ ಇರೋ ಹುಣಿಸೆ ಮರದಿಂದ ಬೀಳಿಸಿದ ದೋರೆ ಕಾಯಿಯ ಜೊತೆ ಅದೇ ಹಳೆ ಸ್ಕೂಲ್ ನ ಗಲೀಜು ಕಲ್ಲು ಚಪ್ಪದಿ ಇದೆ ಅಲ್ವಾ ಅದ್ರ ಮೇಲೆ ಹದವಾಗಿ ಜಜ್ಜಿ ಯಾರೋ ಬಿಸಾಡಿದಆರಿದ ಅದೇ ಮರದ ಬೆಂಕಿ ಕಡ್ಡಿ ಇರ್ತಿತ್ತಲ್ವ ಅದ್ರಲ್ಲಿ ಚುಚ್ಚಿಕೊಂಡು ಚೀಪೂವಾಗ ಸಿಗುವಂತ ಮಜಾನ ಈಗ್ಲೂ ಹೇಗೆ ಬಚ್ಚಿಟ್ಟುಕೊಳ್ಳುವುದು ಅಂತ ಯಾವಾಗ್ಲೂ ಯೋಚಿಸುತ್ತಾ ಇರ್ತೀನಿ. ಇಲ್ಲಿರೋ ಫ್ರೆಂಡ್ಸ್ ಎಲ್ಲ ತಮಾಶೇನೂ ಮಾಡ್ತಾರೆ... ಅಲ್ವೋ ಇನ್ನೇನು ಅಸಿಸ್ಟೆಂಟ್ ಪ್ರೊಫೆಸರ್ ಆಗ್ತಾ ಇದ್ದೀಯಾ ಇನ್ನೂ ೩ನೇ ಕ್ಲಾಸ್ಸಲ್ಲಿ ಅಕ್ಕ ಪಕ್ಕ ಕೂತ ಹುಡುಗಿಯರ ಜಡೆ ಗಂಟೋ ಹಾಕೋ ಅಭ್ಯಾಸ ಬಿಟ್ಟಿಲ್ವಲ್ಲೋ ಅಂತ. ಆದ್ರೆ ನಾನು ಹೇಳೋದು ಮನುಷ್ಯ ಮುದುಕ ಆಗೋದು ಮನಸ್ಸಲ್ಲಿ ಕಣ್ರೀ. ನನ್ನ ನಿಮ್ಮ ಎಲ್ಲರ ಒಳಗೆ ಒಬ್ಬ ಹುಡುಗನೋ ಹುಡುಗಿಯೋ ಇದ್ದೇ ಇರ್ತಾಳೆ. ಕೆಲವರು ಅದನ್ನ ಎಷ್ಟಾಗುತ್ತೋ ಅಷ್ಟು ಅದುಮಿ ಹಾಕ್ತರೆ. ಅದಕ್ಕೆ ಯಾವಾಗ್ಲೂ ಟೆನ್ಶನ್ ಇಟ್ಟುಕೊಂಡು ಹದಿ ವಯಸ್ಸಲ್ಲೇ ನಿದ್ದೆ ಮಾಡದೇ ಡೈಯಬಿಟೀಸ್ ಬ್ಲಡ್ ಪ್ರೆಶರ್ ಅಂತ ಮುದ್ಕರೂ ಅಗ್ತಾರೆ ಅಂತ ಕಾಣತ್ತೆ. ನಂಗೇನೋ ಮಗು ಇಲ್ಲ . ಮಗು ಇದ್ದೋರು ನೀವೇ ಹೇಳ್ರಿ. ಬೆಳಿಗ್ಗೆ ಎಲ್ಲ ಮಗು ಎದ್ದಿದ್ರೆ ರಾತ್ರಿ ಆಟ ಬೇಕು ಅಂತ ಅಳಲ್ವಾ... ಅದಕ್ಕೆ ನಿದ್ದೆ ಬರಲ್ಲ , ಹಂಗೆ ನಿಮ್ಮ ಒಳಗಿರುವ ಮಗು ಕೂಡ. ಬೆಳಿಗ್ಗೇನೋ ಮಧ್ಯಾಹ್ನನೋ ಆಗಾಗ ಚಿವುಟಿ ಆದರೂ ಆ ಮಗೂನಾ ಎಬ್ಬಿಸಿ ನೋಡಿ. ರಾತ್ರಿ ನಿಮ್ಗೆ ಹೇಗೆ ನಿದ್ದೆ ಬರುತ್ತೆ ಅಂತ. ಬೆಳಿಗ್ಗೆ ಇಡೀ ಜಗತ್ತೇ ನಿಮ್ಮದು ಅನ್ನಿಸುತ್ತೆ. ನಿಮ್ಗೆ ಜೀವನದಲ್ಲಿ ನಾರ್ಮಲ್ ಆಗಿ ಕಾಣುವ ಘಟನೆಗಳು ಕೂಡ ಅಮ್ಯೂಸಿಂಗ್ ಆಗಿ ಬಿಡತ್ತೆ. ಈ ಎಲ್ಲ ವಿಷ್ಯ ಗಳು ನನ್ನ ಒರಿಜಿನಲ್ ಥಾಟ್ಸ್ ಏನೂ ಅಲ್ಲ. ಎಲ್ಲೋ ನೋಡಿದ್ದು ಕೇಳಿದ್ದು ಮನಸ್ಸಿನ ಒಳಗೆ ಕೂತು ಕಿರಿಪಿರಿ ಮಾಡ್ತಾ ಇರುತ್ತೆ. ಟೀವೀ ಶೋ ನೋ ಏನೋ ಒಂದು. ಹಂಗೆ ಅಪ್ಪನ ಹತ್ತಿರ ಮಾತಾಡ್ತಾ ಇರೋವಾಗ ಸಡನ್ ಆಗಿ ಮಾತು ಅಧ್ಯಾತ್ಮ ದ ಕಡೆ ತಿರುಗಿತು. ಅಪ್ಪ ಹೇಳ್ತಾ ಇದ್ದರು ನೋಡೋ ಸಾಲಿಗ್ರಾಮವನ್ನು ನೀನು ತೆಗೆದು ಸ್ನಾನ ಮಾಡಿಸಿ ಗಂಧ ಹಚ್ಚಿ ಹೂವು ಏರಿಸಿ ಸಂಗೀತ ಹಾಡಿ ಮಂಗಳಾರತಿ ಎತ್ತಿ ಮಲಗಿಸುವಾಗ ನೀನು ನಿನ್ನ ಒಳಗಿನ ಆತ್ಮವನ್ನೇ ಹೊರಗೆ ತೆಗೆದು ಈ ಎಲ್ಲ ಕ್ರಿಯೆಗಳನ್ನು ಮಾಡ್ತಾ ಇದ್ದೀಯಾ ಅಂತ ಯೋಚಿಸುವ ಹಾಗೆ ಮಾಡ್ತಾ ಇದ್ದರೆ ನಿನ್ನ ಯೋಚಿಸುವ ಶೈಲಿಗೆ ಹೊನ್ದಲ್ವೆನೊ ಅಂತಹಾಗೆ ಸ್ವಲ್ಪ ಲೈಟ್ ಮಾತು ತುಂಬಾ ಮಾತು ಗಹನ ಆದ್ರೆ ನಿಂಗೂ ಬೋರ್ ಹೋಡಿಸ್ಬಹುದು. ಅಲ್ಲದೇ ದಿನಕ್ಕೊಂದು ಪ್ಯಾಕ್ ಸಿಗೆರೆಟ್ಟು ೩ ಬಿಯರ್ ಹೋಡೀವಾ ನಾನು ಅಧ್ಯಾತ್ಮ ಮಾತಾಡೋದು ಅಷ್ಟೇನೂ ಚೆನ್ನಾಗೂ ಕಾಣೋಲ್ಲ. ಆದ್ದರಿಂದ ಎಲ್ಲರಿಗೂ ಇಂಟ್‌ರೆಸ್ಟಿಂಗ್ ವಿಷಯದ ಬಗ್ಗೆ ಹರಟೆ ಹೊಡಿಯುವ.ಅದೇ ಎಲ್ಲರ ಇಂಟ್ರೆಸ್ಟಿಂಗ್ ವಿಷಯ ಕಣ್ರೀ ಸ್ವಲ್ಪ ಪೋಲಿ ಆದ್ರೆ....ಅಲ್ಪ ಸ್ವಲ್ಪ ಪೋಲಿ ಬುದ್ಧಿ ನ ಇನ್ನೂ ಇಟ್ಕೊಡು ಇರೋದ್ರಲ್ಲಿ ಏನೂ ತಪ್ಪಿಲ್ಲ ಕಣ್ರೀ. ಅದೇ ವಿಷಯದ ಬಗ್ಗೆ ಮೊನ್ನೆ ಹೀಗಾಯ್ತು.ಹೀಗೆ ನಾನು ಮತ್ತು ನನ್ನ ಚೈನೀಸ್ ಗೆಳೆಯ ಫೂ ಮತ್ತು ಲೆಬನೀಸ್ ಗೆಳೆಯ ಒಬ್ಬಾಮೊಹಮ್ಮೇದ್ ನಮ್ಮ ಲಾಬ್ನ ಬಿಲ್ಡಿಂಗ್ ಹೊರಗೆ ಕೂತ್ಕೊಂದಿದ್ವಿ. ನಾನು ಮತ್ತು ಮೊಹಮ್ಮದ್ ಹೊಗೆ ಎಳಿತ ಇದ್ವಿ. ಅವ್ನೋ ನಾರ್ಮಲ್ ಆಗಿ ಈ ಫಿರಂಗಿಗಳು ಇದ್ದಾರಲ್ಲ ಅವ್ರಗಿಂತ ಕೆಂಪು. ಅದ್ರಲ್ಲೂ ಏನಾದ್ರೂ ಮುಜುಗರವಾದ್ರೆ ಅವನ ಮುಖದಿಂದ ರಕ್ತವೇ ಹೊರಗೆ ಬರುತ್ಟುನೋ ಅನ್ನಿಸುವಷ್ಟು ಕೆಂಪಗ್ತಾನೆ. ಹೀಗೆ ಏನೋ ಮಾತುಕತೆ ಆಡ್ತಾ ಇರುವಾಗ ನನ್ನ ಇತ್ತೀಚೆಗೆ ಬೇಳಿತ ಇರುವ ಕೂದಲಿನ ವಿಷಯ ಬಂತು. ಅವರಿಬ್ಬರೂ ನನ್ನನ್ನ ಉಬ್ಬಿಸಕ್ಕೆ ಶುರು ಮಾಡಿದರು ಕೂಡ. ಆಗ ಮೊಹಮ್ಮದ್ ಹೇಳಿದ ನಾನು ಆಟ ಆಡ್ತಾ ಒಮ್ಮೊಮ್ಮೆ ತಲೆ ಒದರುವಾಗ ಕೂದಲು ಆಚೀಚೆ ಹಾರುವುದು ಅವನಿಗೆ ಏನೋ ಕ್ಯೂಟ್ ವಿಷಯದ ಬಗ್ಗೆ ನೆನೆಪಿಸುತ್ತೇನೆಂದು. ಹಾಂ! ನಾ ಕೇಳಿದೆ ಏನೋ ಅದು? ಉತ್ತರ ಅದೇ ಜೂಲು ನಾಯಿಯ ಮೈ ಮೇಲೆ ನೀರು ಬಿದ್ದಾಗ ಅದು ಮೈ ಒದರುತ್ತಲ್ಲ ಹಾಗೆ ಎಂದು! ಅದಕ್ಕೆ ಫೂ ಏನಾದ್ರೂ ಒಗ್ಗರಣೆ ಹಾಕಬೇಕಲ್ಲ ಮೊಹಮ್ಮದ್ ನನ್ನು ಉದ್ದೇಶಿಸಿ ಫೂ ಹೇಳಿದ... ನೋಡು ಮೊಹಮ್ಮದ್ ನಾನು ಸ್ಟ್ರೇಟ್ ......ಫಾರ್ ವಾರ್ಡ್. ಆ ಸ್ಟ್ರೇಟ್ ಮತ್ತು ಫಾರ್ವರ್ಡ್ ನ ಮಧ್ಯ ಇದ್ದಂತಾ ಪಾಸ್ ನನ್ನ ಮತ್ತು ಫೂ ನ ಮುಖದಲ್ಲೂ ನಗೆ ಮೂಡಿಸುತ್ತಿತ್ತು. ಮೊಹಮ್ಮದನ ಮುಖ ಕೆಂಪಾಗುತ್ತ ಇತ್ತು. ಮುಂದೆ ವಿಷಯ ಎಲ್ಲೆಲ್ಲಿಗೋ ಹೋಯಿತು ಆ ವಿಷಯ ಬಿಡಿ.

ಸಖೀಗೀತ

ಕನವರಿಕೆ :
೨ಏನ್ರೀ ಈ ಅಪರ್ಣಾ ಇದ್ದಾರಲ್ಲ ಅದೇ ಕನ್ನಡಪ್ರಭದಲ್ಲಿ ವಾರಕ್ಕೊಮ್ಮೆ ಬರೀತಾ ಇರ್ತಾರೆ ಅದೇ ಸಖೀಗೀತ ಕಾಲಮ್ಮಲ್ಲಿ. ತುಂಬಾ ಚೆನ್ನಾಗಿರುತ್ತೇರಿ. ನಾನು ಪೀ ಯು ಸೀ ನಲ್ಲಿದ್ದಾಗ ಇವ್ರು ಟೀವೀ ನಲ್ಲಿ ಬರ್ತಾ ಇದ್ರು. ಏನೋ ಚೆನ್ನಾಗೇನೋ ನಗ್ತಾರೆ ಮಾತೂ ಪರ್ವಾಗಿಲ್ಲ ಅಲ್ಪ ಪ್ರಾಣ ಮಹಾಪ್ರಾಣ ಹ ಮತ್ತೆ ಪ ಎಲ್ಲ ಮಿಕ್ಸ್ ಮಾಡೋಲ್ಲ ಅಂತ ಪ್ರೋಗ್ರ್ಯಾಮ್ಸ್ ನೋಡ್ತಾ ಇದ್ವು ಅಂತ ಕಾಣತ್ತೆ. ಆವಾಗ ಈಗ ಇರುವಷ್ಟು ಚ್ಯಾನೆಲ್ಸ್ ಕೂಡ ಇರ್ಲಿಲ್ಲ. ಅದೇ ಚೆನ್ನಾಗಿತ್ತೇನೋ. ಏನೋ ಎರಡು ವರ್ಷದ ಹಿಂದೇನೋ ಏನೋ ಲ್ಯಾಬ್ ನಲ್ಲಿ ಬೋರ್ ಆಗಿ ಕನ್ನಡಪ್ರಭ ಓದಕ್ಕೆ ಶುರು ಮಾಡಿದವ್ನಿಗೇ ಚಟ ಹತ್ತಿಸ್‌ಬಿಟ್ರಲ್ಲರಿ, ಎಂತ ಘಾಟಿ ಹೆಣ್ಣು ಅಂತೀರೀ. ಕೆಲವು ಸಲ ಆವ್ರು ಬರಿಯೋದು ನಿಮ್ಮನ್ನ ನಿಮ್ಮ ಪ್ರಾಜೆಕ್ಟ್, ಕಾರ್ ಲೋನ್ ಮನೆ ತಾಪತ್ರಯ ಎಲ್ಲ ಬಿಟ್ಟು ಒಂದೇ ಸಲ ೨೦ ವರ್ಷ ಹಿಂದೆ ಎತ್ಟಾಕ್ಬಿಡುತ್ತೆ ಅಂತೀನಿ. ಡೇಂಜರಸ ಕಾಲಮ್ಮುree ಸ್ವಲ್ಪ ಹುಷಾರಾಗಿ ಓದಿ ಅಂತೀನಿ.ಇವತ್ತು ಏನೋ ದೆವ್ವ ಹಿಡ್ಕೊಂಡವ್ನ ಹಾಗೆ ಬರೀತಾ ನೇ ಇದ್ದೀನಿ. ಆಗ್ಲೇ ೩ ಗಂಟೆ ಆಗ್ತಾ ಬಂತು ಬೆಳಗ್ಗಿಂದ ಮುಖಾನೂ ತೋಳಿದೆ ಬರಿತಾನೆ ಇದ್ದೀನಿ. ಏನೋ ಹುಚ್ಚ ಅನ್ಕೋಬಹುdu ನೀವು. ಪರ್ವಾ ಇಲ್ಲ ಬಿಡಿ . ಇವತ್ತು ಇಷ್ಟೇ ಅಂತ ಕಾಣುತ್ತೆ.